ಹುಬ್ಬಳ್ಳಿಯಲ್ಲಿ ಎಂಎಲ್ಸಿ ಸಿ.ಟಿ.ರವಿ ಅವರು ರಾಜ್ಯದ ಸ್ಟಿಂಗ್ ಆಪರೇಷನ್ ವಿಚಾರವಾಗಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಸ್ಟಿಂಗ್ ಆಪರೇಷನ್ ಬಗ್ಗೆ ಹೆಚ್ಚಿನ ಮಾಹಿತಿ ಸಿಎಂ ಬಳಿಯೇ ಇದೆ. ರಾಜ್ಯಾದ್ಯಂತ ಬರಗಾಲವಿದೆ, ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಈ ಪರಿಸ್ಥಿತಿಯಲ್ಲಿ ಸಂಪುಟದಲ್ಲಿ ಬರಗಾಲದ ಬಗ್ಗೆ ಚರ್ಚೆಯಾಗಬೇಕಿತ್ತು. ಆದ್ರೆ ಸಂಪುಟದಲ್ಲಿ ಸ್ಟಿಂಗ್ ಆಪರೇಷನ್, ಜಿಲೇಬಿ, ಜಾಮೂನು ಬಗ್ಗೆ ಚರ್ಚೆಯಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ಪ್ರಾಮಾಣಿಕರಾಗಿರಿ ಅಂತ ಹೇಳಲಿಲ್ಲ, ಹುಷಾರಾಗಿರಿ ಅಂತ ಹೇಳಿದ್ದಾರೆ. ಮಾಜಿ ಸಿಎಂ ಬಗ್ಗೆ ಒಂದು ಅಭಿಪ್ರಾಯ ಮೂಡಿಸುವಂತೆ ಬಿಟ್ಟಿರೋ ವಿಡಿಯೋ ಇದು ಕಾಂಗ್ರೆಸ್ ನ ಆಂತರಿಕ ರಾಜಕಾರಣದ ಕುತಂತ್ರದ ಭಾಗ ಎಂದು ಆರೋಪಿಸಿದರು.
ವಿರೋಧ ಪಕ್ಷದವರು ಬಿಡೋದಾಗಿದ್ರೆ ಅವರು ಸಿಎಂ ಇದ್ದಾಗಲೇ ಬಿಡ್ತಿದ್ದರು. ಅವರನ್ನು ಬಗ್ಗಿಸಲು ಆಡಳಿತ ಪಕ್ಷದವರೇ ಇದನ್ನು ಮಾಡ್ತಿದ್ದಾರೆ. ಸ್ಟಿಂಗ್ ಮಾಡಿದವರನ್ನು ಬಿಟ್ಟು ಪೋಸ್ಟ್ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ, ಸ್ಟಿಂಗ್ ಮಾಡಿದವರನ್ನು ಹಿಡಿಯಿರಿ ಎಂದು ಸವಾಲು ಹಾಕಿದರು.
ಈ ಪ್ರಕರಣದ ರೂವಾರಿಗಳು, ಸೂತ್ರಧಾರಿಗಳು, ಪಾತ್ರಧಾರಿಗಳು ಕೂಡಾ ಕಾಂಗ್ರೆಸ್ ನವರೇ ಆಗಿದ್ದಾರೆ ಎಂದು ಗುಡುಗಿದರು.