ಹುಬ್ಬಳ್ಳಿ-ಧಾರವಾಡ ಮಂದಿಗೆ ಬಿಗ್ ನ್ಯೂಸ್! ಬಾಲಿವುಡ್ ನ ಖ್ಯಾತ ನಟಿ, ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಅಕ್ಟೋಬರ್ 17ರಂದು ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್ (Cubics Hotel) ನಲ್ಲಿ ನಡೆಯಲಿರುವ ಅದ್ಧೂರಿ ದಾಂಡಿಯಾ ರಾಸ್ - 2025 ರ ಬಿಗ್ಗೆಸ್ಟ್ ದಾಂಡಿಯಾ ನೈಟ್ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಮುಖ್ಯ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.
ತಾವೇ ವಿಡಿಯೋ ಮೂಲಕ ಹುಬ್ಬಳ್ಳಿ ಜನತೆಗೆ ಆಹ್ವಾನ ನೀಡಿರುವ ಶಿಲ್ಪಾ ಶೆಟ್ಟಿ, "ಹಾಯ್ ಹುಬ್ಬಳ್ಳಿ, ನಾನು ನಿಮ್ಮ ನಗರಕ್ಕೆ ಬರುತ್ತಿದ್ದೇನೆ, ನೀವು ರೆಡಿ ಇದ್ದೀರಾ? ಅಕ್ಟೋಬರ್ 17ಕ್ಕೆ ಕ್ಯೂಬಿಕ್ಸ್ ಹೋಟೆಲ್ ನಲ್ಲಿ ಸಿಗೋಣ" ಎಂದು ಹೇಳಿದ್ದಾರೆ.
ಈ ಬಾರಿಯ ದಾಂಡಿಯಾ ಹಬ್ಬ ಇನ್ನಷ್ಟು ವಿಶೇಷವಾಗಲಿದ್ದು, ಆಯೋಜಕರು ಭರ್ಜರಿ ತಯಾರಿ ನಡೆಸಿದ್ದಾರೆ.