ಇವತ್ತು RSS ನ rally ಗೆ objection ಹಾಕ್ತಾ ಇದ್ರೂ, ಖರ್ಗೆ ಅವರು objection ಹಾಕಿದ್ರೂ, ಇವತ್ತು ಯಶಸ್ವಿಯಾಗಿ ಇಲ್ಲಿ ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಆಗಿದೆ.
ಯಾವತ್ತೂ ಹುಬ್ಬಳ್ಳಿಯಲ್ಲಿ RSS ಪಥಸಂಚಲನದಲ್ಲಿ ಅಥವಾ ಇಡೀ ರಾಜ್ಯಾದ್ಯಂತ, ಇಡೀ ದೇಶಾದ್ಯಂತ ಎಲ್ಲೂ ಏನು ಆಗಿಲ್ಲ, ಇಲ್ಲೂ ಬಹಳ ಯಶಸ್ವಿಯಾಗಿ, ಚೆನ್ನಾಗಿ ನಡೆದಿದೆ.
ಅವರು ತುಷ್ಟೀಕರಣಕ್ಕಾಗಿ ಈ ಕೆಲಸವನ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಪಾರ್ಟಿಗೆ ಮುಂಬರುವ ದಿವಸದಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ.
ಇದು ಇಂತಹ ಸಂಘಕ್ಕೆ ಅವರು ಯಾಕೆ ಅನುಮತಿ ಪಡೆಯಬೇಕು ಅಂತ ಸ್ಪಷ್ಟೀಕರಣ ಕೊಟ್ಟಿದ್ದು, ಇದು ತುಷ್ಟೀಕರಣಕ್ಕೋಸ್ಕರ.
ಮುಸ್ಲಿಂ ಬಾಂಧವರು ಇವತ್ತು ಎಲ್ಲ ರಸ್ತೆಯಲ್ಲಿ ನಿಂತು ಹೂವಿನ ಮಳೆ ಸುರಿಸಿದ್ದಾರೆ
RSS ಆಗ್ಲಿ, BJP ಆಗ್ಲಿ ಯಾರೇ ಆಗ್ಲಿ ಯಾರೂ ಮುಸ್ಲಿಂ ವಿರೋಧಿ ಅಲ್ಲವೇ ಅಲ್ಲ. ಇವರು ಅದನ್ನ ಆ ರೀತಿ ಪ್ರಾಜೆಕ್ಟ್ ಮಾಡಿ ತಮ್ಮ ವೋಟ್ ಬ್ಯಾಂಕ್ ಕಟ್ಟಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರೆ. ಅದರಿಂದ ಅವರಿಗೆ ಏನು ಲಾಭ ಆಗುತ್ತೆ ಅಂತ ಭಾವಿಸಿದರೆ, ಈಗ ಅವರು ತುಷ್ಟೀಕರಣದಿಂದ ಅವರೇ ಕೆಳಗೆ ಬೀಳ್ತಾರೆ.*"