ಹುಬ್ಬಳ್ಳಿ ತಾಲೂಕಿನಲ್ಲಿ ಒಂದೇ ರಾತ್ರಿ 2 ಕಡೆ ದರೋಡೆ ಆಗಿದೆ . ಬೆಳಗಿನ ಜಾವ ಹೊಂಚು ಹಾಕಿ, ಗ್ಯಾಸ್ ಕಟರ್ ನಿಂದ ATM ಶಟರ್ ಕಟ್ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡೋಕೆ CCTV ಕ್ಯಾಮೆರಾ ಒಡೆದು, ಆಮೇಲೆ ಮಷಿನ್ ನ ಕ್ಯಾಶ್ ಬಾಕ್ಸ್ ಕತ್ತರಿಸಿ ಹಣ ಸಮೇತ ಪರಾರಿ ಆಗಿದ್ದಾರೆ
ಸುಳ್ಳ ಗ್ರಾಮದ ಕೆನರಾ ಬ್ಯಾಂಕ್ ATM ನಲ್ಲಿ 11 ಲಕ್ಷ ಬ್ಯಾಹಟ್ಟಿ ಗ್ರಾಮದ ಕೆನರಾ ಬ್ಯಾಂಕ್ ATM ನಲ್ಲಿ 3 ಲಕ್ಷ ಒಟ್ಟು 14 ಲಕ್ಷ ಲೂಟಿ ಮಾಡಿ ಪರಾರಿ ಆಗಿದ್ದಾರೆ
ಏಕಕಾಲಕ್ಕೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಆಗಿದ್ದರಿಂದ ಸ್ಥಳೀಯರಲ್ಲಿ ಭಯ ಶುರುವಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.