Home / ಧಾರವಾಡ / ಹುಬ್ಬಳ್ಳಿ NH48 ಬಂದ್! 🚧 ಸಾವಿರಾರು ಗಾರ್ಮೆಂ...

ಹುಬ್ಬಳ್ಳಿ NH48 ಬಂದ್! 🚧 ಸಾವಿರಾರು ಗಾರ್ಮೆಂಟ್ಸ್ ಕಾರ್ಮಿಕರ ದಿಢೀರ್ ಪ್ರತಿಭಟನೆ

E
By ETV 24X7 Chief Admin
September 30, 2026 337 views 0 comments Edit Article
ಹುಬ್ಬಳ್ಳಿ NH48 ಬಂದ್! 🚧
ಸಾವಿರಾರು ಗಾರ್ಮೆಂಟ್ಸ್ ಕಾರ್ಮಿಕರ ದಿಢೀರ್ ಪ್ರತಿಭಟನೆ

ಹುಬ್ಬಳ್ಳಿ ಸಮೀಪದ ತಾರಿಹಾಳ ಬಳಿ ಶಾಹಿ ಗಾರ್ಮೆಂಟ್ಸ್ ನೌಕರರು ಕೇಂದ್ರ ಸರ್ಕಾರದ ಹೊಸ ಭವಿಷ್ಯ ನಿಧಿ ನೀತಿಯನ್ನು ವಿರೋಧಿಸಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಫ್ಯಾಕ್ಟರಿ ಕೆಲಸಕ್ಕೆ ಗೈರಾಗಿ ಬೀದಿಗಿಳಿದ ಸಾವಿರಾರು ಕಾರ್ಮಿಕರು, ಹೊಸ ಪಿಎಫ್ ನೀತಿ ಕೈಬಿಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ NH48 ಬಂದ್! 🚧
ಸಾವಿರಾರು ಗಾರ್ಮೆಂಟ್ಸ್ ಕಾರ್ಮಿಕರ ದಿಢೀರ್ ಪ್ರತಿಭಟನೆ 

#Hubballi  #Dharwad  #ShahiGarments #PFProtest  #NH48 Tarihal KannadaNews EETV24x7"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಈ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಧಾರವಾಡ ಎಸ್ ಪಿ, ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣನವರ್ ಅವರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಧಿಕಾರಿಗಳ ಭರವಸೆ ಬಳಿಕ ಕಾರ್ಮಿಕರು ಹೆದ್ದಾರಿ ತೆರವುಗೊಳಿಸಿದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.