ಕೊನೆಗೂ ಕನ್ನಡಿಗರ ಮುಂದೆ ಕ್ಷಮೆಯಾಚಿಸಿದ್ದಾರೆ ಖ್ಯಾತ ಗಾಯಕ ಸೋನು ನಿಗಮ್.
ನಾನು ಅಂದು ಆಡಿದ್ದ ಮಾತಿನ ಸತ್ಯ ನನಗೆ ಮತ್ತು ದೇವರಿಗೆ ಗೊತ್ತಿದೆ, ಆದರೂ ನನ್ನ ಮಾತಿನಿಂದ ಕನ್ನಡಿಗರಿಗೆ ನೋವಾಗಿದ್ದಲ್ಲಿ ನಾನು ಕ್ಷಮೆಯಾಚನೆ ಮಾಡುತ್ತೇನೆ ಎಂದು ಸೋನು ನಿಗಮ್ ಹೇಳಿದ್ದಾರೆ.
"ನನ್ನ ಕನ್ನಡಿಗರೇ, ನನ್ನ ಕುಟುಂಬದವರೇ" ಅಂತಾ ಸಂಬೋಧಿಸಿ ಮಾತನಾಡಿದ ಸೋನು ನಿಗಮ್, ನಿಮ್ಮ ಪ್ರೀತಿ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ.
ಅಲ್ಲದೆ, ನಾನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಜೊತೆಯೂ ಮಾತನಾಡಿದ್ದೇನೆ, ಪ್ರೀತಿ ಇದ್ದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ, ಅವರು ಗೌರವದಿಂದ ಮಾತನಾಡಿದ್ದಾರೆ. ಕನ್ನಡಿಗರ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ.